ಮನಸಲ್ಲಿ ಪ್ರೀತಿ ಅಲೆಗಳ ಸದ್ದು
ಕೇಳಿಸದು ಇದು ಮುದ್ದು ಪೆದ್ದು (೨ ಸಲ)
ಮಾಗಿದ ಎದೆಯಲಿ ಪ್ರೀತಿಯ ಬೀಜ
ಬಿತ್ತಿದಳು ನನ್ನ ಈ ಮುದ್ದು ರೋಜಾ
ಮುಪ್ಪಿನ ಪೊರೆ ಕಳಚಿ ತಾರುಣ್ಯ ಬರಲು
ಕಾರಣ ಇವಳೇ ಅದಕೆ ಮನದಲಿ
ಅವಳದೇ ಅಮಲು
ಮನಸಲ್ಲಿ ಪ್ರೀತಿ ಅಲೆಗಳ ಸದ್ದು
ಕೇಳಿಸದು ಇದು ಮುದ್ದು ಪೆದ್ದು (೨ ಸಲ)
ನನ್ನನ್ನು ಮೆಚ್ಚುಹಳು ಎಂದೆನಗೆ ಹೆಮ್ಮೆ
ಹರೆಯ ಹುಕ್ಕಿ ಬಂತೆನಗೆ ಮತ್ತೊಮ್ಮೆ
ಈ ಭಾವ ಹೊಸತೆನಗೆ ನಾ ಪ್ರೀತಿ ಮಗುವು
ಈ ನೋವು ಕೊನೆ ವರೆಗೂ ಇರೆ ಇಲ್ಲ ಸಾವು
ಮನಸಲ್ಲಿ ಪ್ರೀತಿ ಅಲೆಗಳ ಸದ್ದು
ಕೇಳಿಸದು ಇದು ಮುದ್ದು ಪೆದ್ದು (೨ ಸಲ)