ಸೊಂಪಾದ ಇರುಳಲ್ಲಿ
ಸುರಿದಾಳ ಬೆಳಕು
ಮುಪ್ಪಾದ ಬದುಕಲ್ಲಿ
ತಂದಾಳ ಸೊಬಗು
ಬಾನಿಂದ ಇಳಿದಂತ ಚಂದಿರನ ಚೂರು
ಮಿಂಚಂತೆ ಬಳುಕುತ್ತ ಬಂದ ಇವಳ್ಯಾರು
ಸೃಷ್ಟಿಲೇ ಕಂಡಿಲ್ಲ ಇವಳಂತ ಚೆಲುವೆ
ಹೇ ಇವಳ ವರ್ಣಿಸಲು ಪದಗಳ ನಾನೇ ಹೆರುವೆ
ಸೊಂಪಾದ ಇರುಳಲ್ಲಿ
ಸುರಿದಾಳ ಬೆಳಕು
ಮುಪ್ಪಾದ ಬದುಕಲ್ಲಿ
ತಂದಾಳ ಸೊಬಗು
ಬದುಕಿನ ಪುಸ್ತಕದಿ ಪ್ರತಿ ಸಾಲು ಇವಳೇ
ನಾ ಬರೆವ ಪ್ರತಿ ಪದಕು ಸ್ಫೂರ್ತಿ ನೀ ಎನಲೇ
ಹೊತ್ತಿರುವೆ ಇವಳಿಂದ ಹೊಸ ಕನಸ ಬಸಿರು
ಹೇ ಚೆಲುವಿಗೆ ಪ್ರತಿಪದವೇ ಇವಳ ಹೆಸರು
ಸೊಂಪಾದ ಇರುಳಲ್ಲಿ
ಸುರಿದಾಳ ಬೆಳಕು
ಮುಪ್ಪಾದ ಬದುಕಲ್ಲಿ
ತಂದಾಳ ಸೊಬಗು